
ರಾಜ್ಯದಲ್ಲಿ ವಿಪರೀತ ಮಳೆಯಾಗಿದೆ. ಜನರ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯದಲ್ಲಿ 5 ರಿಂದ 6 ಲಕ್ಷ ಎಕ್ಟೆರ್ ಬೆಳೆ ನಷ್ಟ ಆಗಿದೆ. ಸರ್ಕಾರದ ಪರಿಹಾರದ ಗೈಡಲೈನ್ ನಿಂದ ಜನರ ಸಮಸ್ಯೆ ಸರಿಪಡಿಸಲಾಗದು. ಗೈಡ್ ಲೈನ್ ವರದಿ ಇಟ್ಟುಕೊಂಡು ಪರಿಹಾರ ಕೊಡೋದು ಸರಿಯಲ್ಲ. ಮೊದಲು ಅದನ್ನ ಬದಿಗೊತ್ತಿ ನಷ್ಟವಾಗಿರುವ ಬಗ್ಗೆ ಪರಿಹಾರ ಕೊಡಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಮೈಸೂರಲ್ಲಿ ಮಾತಾಡಿದ ಅವ್ರು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ರಸ್ತೆಗಳು ಬ್ರಿಡ್ಜ್ ಹಾಳಾಗಿದೆ. 20ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಸರ್ಕಾರದಲ್ಲಿರುವ ಮಂತ್ರಿಗಳು ಕಾಟಾಚಾರಕ್ಕೆ ಸರ್ವೆ ಮಾಡಬಾರದು. ಈಗಾಗಲೇ ಸಚಿವರು ಹೋಗಿ ಸರ್ವೆ ಮುಗಿಸಬೇಕಿತ್ತು. ಆದರೆ ಈ ವರೆಗೂ ಸರ್ಕಾರ ಆ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು. ಜನರ ಹಿತದೃಷ್ಟಿಗೆ ಸರ್ಕಾರ ಕೆಲಸ ಮಾಡಬೇಕು ಅಂತ ತಿಳಿಸಿದರು.
#HDKumaraswamy #Farmers #CropDamageRelief
Our Website: https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
0 Comments